Friday, March 8, 2013

Election Story


  • ಸುನೀಲ್ ಕುಂಭೇನಹಳ್ಳಿ 

ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಮುಕ್ತಾಯವಾಗಿ ಗೆಲ್ಲುವ ಕುದುರೆ ಯಾವುದು ಎಂಬ ಕುತೂಹಲ ಶುರುವಾಗಿದ್ದು, ಏನಾಗಹುದೆಂಬ ಕಾತರ ಎಲ್ಲವರನ್ನು ಕಾಡುತ್ತಿದೆ. ಆದರೆ ಅದೃಷ್ಟದ ಪೆಟ್ಟಿಗೆಗಳು ಮಾತ್ರ ಕೊಠಡಿಯಲ್ಲಿ ಭದ್ರವಾಗಿದೆ.
ಯಾರ ಅದೃಷ್ಟ ಯಾವ ಪೆಟ್ಟಿಗೆಯಲ್ಲಿದೆ ? ಯಾರಿಗೆ ಎಷ್ಟು ಮತ ಬಿದ್ದಿದೆ ? ಯಾವ ವಾರ್ಡ್‌ನಿಂದ, ಯಾವ ಪಕ್ಷಕ್ಕೆ ಹಾಗೂ ವ್ಯಕ್ತಿಗೆ ಅನುಕೂಲಕರ ವಾತಾವರಣ ಇತ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಈ ಬಾರಿಯ ಚುನಾವಣೆಯಲ್ಲಿ ಬಹಳ ಕಷ್ಟವಾಗಿದೆ.

ಹಿಂದೆಲ್ಲ ಚುನಾವಣೆ ಮುಗಿದ ನಾಲ್ಕು ಅಥವಾ ಐದು ದಿನಕ್ಕೆ ಫಲಿತಾಂಶ ಹೊರಬರುತ್ತಿತ್ತು. ಅದೇ ರೀತಿ ಈ ಸ್ಥಳೀಯ ಚುನಾವಣೆಯಲ್ಲಿಯೂ ಕುತೂಹಲಕ್ಕೆ ಅವಕಾಶವಿಲ್ಲ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಹಂತದ ಮತದಾನವಾಗಿದ್ದರಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸುಮಾರು ಹದಿನೈದು ದಿನ ಮತ ಎಣಿಕೆಗಾಗಿ ಕಾಯ್ದಿದ್ದರು. ಆದರೆ ಈ ಸ್ಥಳೀಯ ಸಂಸ್ಥೆಯ ಚುನಾವಣೆ ರಾಜ್ಯಾದ್ಯಂತ ಒಮ್ಮೆಲೆ ನಡೆದಿದ್ದರಿಂದ ಕುತೂಹಲಕ್ಕೆ ಕಾಲವಕಾಶ ಕಡಿಮೆ ಇದ್ದು, ಮೇ.೧೧ ರ ೧೧ಗಂಟೆಗೆ ಮತದಾರರ ತೀರ್ಪು ಪ್ರಕಟವಾಗುತ್ತದೆ. ಅದೃಷ್ಟ ಯಾರತ್ತ ಹೋಗುತ್ತದೆ ಎನ್ನುವುದು ಅಂದೇ ತಿಳಿಯುತ್ತದೆ.

ಹಾಸನ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ ೭೭.೨೮ರಷ್ಟು ಮತದಾನವಾಗಿದ್ದು, ಚುನಾವಣೆಯಾದ ವಿದ್ಯುತ್ ಮತಯಂತ್ರಗಳನ್ನು ಹಾಸನದ ಸರ್ಕಾರಿ ಮಹಿಳಾ ಕಲಾ ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಭದ್ರವಾಗಿ ಇಡಲಾಗಿದೆ. ಇಲ್ಲಿ ಕೆಲವು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೆ ಬಿಡಾರ ಹೂಡಿದ್ದಾರೆ. ಮತ ಪೆಟ್ಟಿಗೆ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ೧೧ರವರೆಗೆ ಕಾಯುತ್ತಿದ್ದರೆ ರಾಜಕೀಯ ಖಂಡರುಗಳು, ಕಾರ್ಯರ್ತರು, ಮತದಾರರು ಅದರಿಂದ ಹೊರಬೀಳುವ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಹಿಂದಿನ ಚುನಾವಣೆಗಳಂತೆ ಈ ಬಾರಿ ಫಲಿತಾಂಶದ ಅವಧಿ ಕಡಿಮೆಯಾಗಿದ್ದರಿಂದ ಎಲ್ಲರಲ್ಲೂ ಉತ್ಸಾಹವಿದ್ದು, ಆದರೂ ನೆನ್ನೆ ಹಾಸನ, ಚನ್ನರಾಯಪಟ್ಟಣ, ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆರಾಯ ತುಂತುರು ಮಳೆ ಭುವಿಗೆ ಬಿದ್ದ ಕಾರಣ ಮತದಾರಿಗೆ ಮುಂದೇನು ಎನ್ನುವ ಯೋಜನೆಯಿಲ್ಲ. ಈಗ ಏನಿದ್ದರೂ ಈಗ ಏನಿದ್ದರೂ ಹೊಲದ ಕೆಲಸ, ಮನೆಯ ಕೆಲಸ, ಮಳೆ ಬಂದರೆ ಜಮೀನಿನಲ್ಲಿ ಬಿತ್ತನೆ ಮಾಡುವತ್ತ ಆಸಕ್ತಿ ತೋರಿದ್ದಾರೆ.

ಯಾರೇ ಗೆಲ್ಲಲಿ, ಸೋಲಲಿ ಬೇರೆಯವರಿಗೇನೂ ಉಪಯೋಗವಿಲ್ಲ. ಗೆದ್ದವರು ತಮ್ಮ ಅನುಕೂಲ ನೋಡಿಕೊಳ್ಳುವರು. ಸೋತವರು ಮನೆಯಲ್ಲಿ ನೆಮ್ಮದಿಯಾಗಿರುವರು. ಆದರೆ ಈ ನಡುವೆ ಓಡಾಡಿಕೊಂಡಿದ್ದವರು ಮಾತ್ರ ಅಬ್ಬೇಪಾರಿಗಳಾಗಿ ನೆಲೆ ಕಳೆದುಕೊಂಡು ಮತ್ತೆ ಹೊಸ ಉದ್ಯೂಗ ಹುಡುಕುವ ಕಾಯಕದಲ್ಲಿದ್ದಾರೆ.

ಅಭ್ಯರ್ಥಿಗಳ ಸೋಲು ಗೆಲುವು ಬೇರೆ ಪ್ರಶ್ನೆ. ಗೆದ್ದರೆ ಎಲ್ಲರ ಆದ್ಯತೆ ಹತ್ತೆಂಟು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಭರವಸೆ ಚುನಾವಣೆಗೆ ಮುಗಿಯಿತು. ಈಗೇನು ಎಂಬುದು ಸ್ಪಷ್ಟವಿಲ್ಲ. ಆದರೆ ಫಲಿತಾಂಶ ಹೊರಬೀಳುವವರೆಗೆ ಎಲ್ಲರನ್ನೂ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ. ಕೆಲವರಿಗೆ ಪಕ್ಷದ ಸಂಘಟನೆ ಮುಖ್ಯವಾದರೆ ಮತ್ತೆ ಕೆಲವರಿಗೆ ಜನರ ಸಮಸ್ಯೆ ಪರಿಹಾರಕ್ಕೆ ಓಡಾಡುವತ್ತ ಆದ್ಯತೆ. ಆದರೆ ಇವೆಲ್ಲವೂ ಫಲಿತಾಂಶದ ನಂತರವೂ ಮುಂದುವರೆಯುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.