Thursday, March 3, 2011




ಗೆದ್ದು  ಬಾ  ಇಂಡಿಯಾ  
ಹಾರೈಸೋಣ ನಮ್ಮವರನ್ನು
ನಮ್ಮ ಕ್ರಿಕೆಟ್ ಸೈನ್ಯವನ್ನು
ವಿಶ್ವವೇ ಕಾದಿದೆ ಕಿರ್ಕೆಟಿಗಾಗಿ
ನಮ್ಮವರ ತೊಡೆ ತಟ್ಟಿದ ಆಟಕ್ಕಾಗಿ
ಜೈಹೋ ನಮ್ಮವರಿಗೆ ಜೈಹೋ


ಕೆಚ್ಚೆದೆಯ ಧೀರತೆಯ ಆಟವಡುತಾ
2011 ವಿಶ್ವಕಪ್ ನಮ್ಮವರದಾಗಲಿ
ಅವಿರತ ಶ್ರಮವು ನನಸಾಗಲಿ
ಸಂಘಟಿತ ಹೋರಾಟವು ಅವರದಾಗಲಿ
ಜೈಹೋ ಧೋನಿ ಪಡೆಗೆ ಜೈಹೋ


ಬರಲಿ ಇನ್ನೊಮ್ಮೆ 83 ರ ನೆನಪು
ಮತ್ತೊಮ್ಮೆ ಲಂಡನ್ ನ ಆಹ್ಲಾದವು
ಮೂಡಿಬರಲಿ ಈ ಉಪಖಂದಡಲಿ
ಅಂತರಾಳದ ಮಾತುಗಳು ಸತ್ಯಾವಾಗಲಿ
ಧೋನಿ ಪಡೆಗೆ ಜಯವಾಗಲಿ


- ಎ. ಎಂ. ಆರಿಫ್ ಜೋಕಟ್ಟೆ

      ಮೈಸೂರಿನಲ್ಲಿ ಹೊಟ್ಟೆಪಾಡಿಗಾಗಿ ಹೆಣ್ಣು ಮಕ್ಕಳು ಬೀದಿಗಿಳಿಯ ತೊಡಗಿದ್ದಾರೆ. ಹೀಗಾಗಿ ನಗರದ ಸಿಟಿ ಬಸ್ ಸ್ಟ್ಯಾಂಡ್ ಸುತ್ತಮುತ್ತ ಹಾಗೂ ಸಯ್ಯಾಜಿರಾವ್ ರಸ್ತೆಯಲ್ಲಿ ಹೆಜ್ಜೆಗೊಬ್ಬರಂತೆ ವೇಶ್ಯೆಯರು ಕಂಡು ಬರುತ್ತಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಮೈಸೂರಿನಲ್ಲಿ ದಿನದಿಂದ ದಿನಕ್ಕೆ ವೇಶ್ಯಾವಾಟಿಕೆ ಹೆಚ್ಚುತ್ತಿದ್ದರೂ ಯಾರೂ ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹಾಗಾಗಿ ದುಡಿದು ಬದುಕುವ ಬದಲು, ಹೆಣ್ಣು ಮಕ್ಕಳು ವೇಶ್ಯಾವೃತ್ತಿಗೆ ಮುಂದಾಗುತ್ತಿರುವುದು ದುರಂತವೇ ಸರಿ.

      ಇವತ್ತು ಮೈಸೂರಿನ ಸಿಟಿ ಬಸ್ ಸ್ಟ್ಯಾಂಡ್ ಒಳಗೆ ಹಾಗೂ ಹೊರಗೆ, ಸಯ್ಯಾಜಿರಾವ್ ರಸ್ತೆ ಮತ್ತು ರಸ್ತೆಗೆ ಲಿಂಕ್ ಕೊಡೋ ಗಲ್ಲಿಯಲ್ಲಿ, ಪ್ರಭಾ ಥಿಯೇಟರ್ ಬಳಿ ಗುಂಪು ಗುಂಪಾಗಿ ನಿಂತು ಗಿರಾಕಿಗಳಿಗಾಗಿ ಕಾಯುವವರು ಒಂದೆಡೆಯಾದರೆ, ಸಾರ್ವಜನಿಕ ರಸ್ತೆಯಲ್ಲಿಯೇ ರಾಜಾರೋಷವಾಗಿ ನಿಂತು ಅಶ್ಲೀಲವಾಗಿ ವರ್ತಿಸುತ್ತಾ ಗಿರಾಕಿಗಳನ್ನು ಸೆಳೆಯುವವರು ಮತ್ತೊಂದೆಡೆ ಕಂಡು ಬರುತ್ತಾರೆ.

      ವೇಶ್ಯೆಯರ ಪೈಕಿ ಕೆಲವರು ಹರೆಯದ ಹುಡುಗಿಯರಿದ್ದರೆ, ಮತ್ತೆ ಕೆಲವರು ಸಂಸಾರಸ್ಥ ಮಹಿಳೆಯರು, ಅಷ್ಟೇ ಅಲ್ಲ ಅರುವತ್ತರ ಆಸುಪಾಸಿನವರೂ ಇಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಹೊಟ್ಟೆಪಾಡಿಗಾಗಿ ಈ ವೃತ್ತಿಗಿಳಿದಿದ್ದರೆ, ಇನ್ನು ಕೆಲವರು ಸುಲಭ ಹಣ ಸಂಪಾದನೆಗಾಗಿ ಪಾರ್ಟ್ ಟೈಂ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಇವರ ನಡುವೆ ಬಡಹುಡುಗಿಯರ ಪರಿಚಯ ಮಾಡಿಕೊಂಡು ಅವರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ವೈಶ್ಯಾವೃತ್ತಿಗೆ ತಳ್ಳುವವರೂ ಇದ್ದಾರೆ. ಕಷ್ಟಪಟ್ಟು ಹೂವು, ತರಕಾರಿ, ಮನೆಕೆಲಸ ಮಾಡಿಕೊಂಡು ಬದುಕುತ್ತಿದ್ದ ಕೆಲವರು ಅದನ್ನು ಬಿಟ್ಟು ಅನಿವಾರ್ಯವಾಗಿ ವೇಶ್ಯಾವಾಟಿಕೆಯತ್ತ ವಾಲುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.


      ಲಾಡ್ಜ್‌ ಗಳಿಗೆ ವೇಶ್ಯೆಯರೇ ಅನ್ನದಾತರು: ಇವತ್ತು ನಗರದ ಕೆಲವೊಂದು ಲಾಡ್ಜ್‌ಗಳಿಗೆ ಈ ವೇಶ್ಯೆಯರೇ ಅನ್ನದಾತರಾಗಿದ್ದು, ಅವರಿಂದಲೇ ಹಲವು ಲಾಡ್ಜ್‌ಗಳು ನಡೆಯುತ್ತಿವೆ ಎಂಬುವುದು ಕೂಡ ಸುಳ್ಳಲ್ಲ. ಇದರ ನಡುವೆ ಕೆಲವು ಲಾಡ್ಜ್‌ಗಳಲ್ಲಿ ತಮ್ಮದೇ ಆದ ಹುಡುಗಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವುದು ಕೂಡ ಸುಳ್ಳಲ್ಲ.
      ಇದುವರೆಗೆ ಪೊಲೀಸರು ಲೆಕ್ಕವಿಲ್ಲದಷ್ಟು ಬಾರಿ ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ದಂಧೆ ಮಾತ್ರ ನಿಂತಿಲ್ಲ.ನಗರದ ಕೆಲವು ಕಡೆಗಳಲ್ಲಿ ಮನೆಗಳಲ್ಲೇ ದಂಧೆ ನಡೆಯುತ್ತಿದೆ. ಮೊಬೈಲ್, ಇಂಟರ್‌ನೆಟ್ ಮೂಲಕವೇ ವ್ಯವಹಾರ ಕುದುರಿಸಿ ಮನೆಗೆ ಗಿರಾಕಿಗಳನ್ನು ಕರೆಯಿಸಿಕೊಂಡು ದಂಧೆ ನಡೆಸಲಾಗುತ್ತಿದೆ. ಇವು ಶ್ರೀಮಂತರೇ ವಾಸಿಸುವ ಬಡಾವಣೆಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಗೆಸ್ಟ್‌ಗಳ ಪೋಸ್‌ನಲ್ಲಿ ಕಾರಿನಲ್ಲಿ ಮನೆಗೆ ಬರುವ ಗಿರಾಕಿಗಳು ವ್ಯವಹಾರ ಮುಗಿಸಿಕೊಂಡು ಹೋಗುತ್ತಾರೆ.

      ಹತಾಶೆಗೊಂಡ ಪೊಲೀಸರು: ಪೊಲೀಸರು ಇಂತಹ ದಂಧೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡೋ ಹೊತ್ತಿಗೆ ಮಗ್ಗುಲು ಬದಲಿಸುವ ಕಸುಬುದಾರರು ಮತ್ತೊಂದು ರೀತಿಯ ಐಡಿಯಾ ಹುಡುಕಿರುತ್ತಾರೆ. ಸಯ್ಯಾಜಿರಾವ್ ರಸ್ತೆಯಲ್ಲಿ ಅಡ್ಡಾಡುವ ಬೀದಿ ವೇಶ್ಯೆಯರನ್ನು ಹತ್ತಿಕ್ಕಲು ನಡೆಸಿದ ಎಲ್ಲಾ ಕ್ರಮಗಳು ವಿಫಲವಾಗಿವೆ.
      ಇಲ್ಲಿರುವ ಅಂಗಡಿ ಮಾಲೀಕರು ಅಂಗಡಿ ಮುಂದೆ, ಸುತ್ತಮುತ್ತ ವೇಶ್ಯೆಯರು ಅಡ್ಡಾಡುವುದರಿಂದ ಮರ್ಯಾದಸ್ಥರು ಅಂಗಡಿಯತ್ತ ಸುಳಿಯದೆ ತೊಂದರೆಯಾಗುತ್ತಿದೆ ಎಂದು ಅಂಗಡಿ ಬಂದ್ ಮಾಡಿ ಬೀದಿಗಿಳಿದು ವೇಶ್ಯೆಯರ ಹಾವಳಿ ಮಟ್ಟಹಾಕುವಂತೆ ಪ್ರತಿಭಟನೆ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ಮೊದಲಿಗಿಂತ ವೇಶ್ಯೆಯರ ಸಂಖ್ಯೆ ಹೆಚ್ಚಾಗಿದೆ. ಇವರನ್ನು ಈ ದಂಧೆಯಿಂದ ಬಿಡಿಸಿ ಯಾವುದಾದರು ಕೆಲಸ ಕೊಡಿಸಿ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಮಾಡಬೇಕಾಗಿದೆ.

      ಮಾನವ ಕಳ್ಳಸಾಗಣೆ: ಇದೆಲ್ಲದರ ನಡುವೆ ಮತ್ತೊಂದು ಆಘಾತಕಾರಿ ಸುದ್ದಿಯೆಂದರೆ ಕೆಲವು ಲಾಡ್ಜ್‌ಗಳಿಗೆ ಇಪ್ಪತ್ತೋ, ಮೂವತ್ತೋ ಸಾವಿರಕ್ಕೆ ಬಾಂಗ್ಲಾದ ಹುಡುಗಿಯರು ಮಾರಾಟವಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಲಾಡ್ಜ್‌ನ ಮೇಲೆ ಪೊಲೀಸರು ದಾಳಿ ಮಾಡಿದಾಗ ಬಾಂಗ್ಲಾ ಹುಡುಗಿಯರು ಸಿಕ್ಕಿಬಿದ್ದಿರುವುದನ್ನು ಗಮನಿಸಿದರೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಬಾಂಗ್ಲಾ ದೇಶದ ಬಡತನ ಅಲ್ಲಿನ ಹುಡುಗಿಯರನ್ನು ಕೆಲಸ ಅರಸಿಕೊಂಡು ಹೊರಗೆ ಹೋಗುವಂತೆ ಮಾಡಿದೆ. ಇದರ ಲಾಭ ಪಡೆದ ಕೆಲವರು ತಮ್ಮ ಚಾಣಾಕ್ಷತನದಿಂದ ಬಾಂಗ್ಲಾ ಗಡಿಯಿಂದ ಅವರನ್ನು ಭಾರತಕ್ಕೆ ದಾಟಿಸುತ್ತಾರೆ
      ಹೀಗೆ ಬಂದ ಹುಡುಗಿಯರನ್ನು ಇಪ್ಪತ್ತೋ ಮೂವತ್ತೋ ಸಾವಿರಕ್ಕೆ ಖರೀದಿ ಮಾಡಿ ದಕ್ಷಿಣ ಭಾರತದ ಲಾಡ್ಜ್‌ಗಳಿಗೆ ರವಾನೆ ಮಾಡಲಾಗುತ್ತದೆ. ಹೀಗೆ ಸಿಗುವ ಹುಡುಗಿಯರನ್ನು ಲಾಡ್ಜ್ ಮಾಲೀಕರು ಖರೀದಿಸಿ ದಂಧೆಗೆ ತಳ್ಳುತ್ತಾರೆ. ಇವರಿಂದ ಬರುವ ಆದಾಯವೆಲ್ಲಾ ಲಾಡ್ಜ್ ಮಾಲೀಕರ ತಿಜೋರಿ ಸೇರುತ್ತದೆ. ಇಂತಹವೊಂದು ಪಿಡುಗನ್ನು ತಡೆಗಟ್ಟುವ ಮೂಲಕ ಅಮಾಯಕ ಹೆಣ್ಣುಮಕ್ಕಳು ಪಾಪದ ಕೂಪಕ್ಕೆ ಸಿಲುಕುವುದನ್ನು ತಡೆಯಬೇಕಾಗಿದೆ.-* ಬಿ.ಎಂ.ಲವಕುಮಾರ್, ಮೈಸೂರು


      ನಿಮ್ಮದೇ ಸ್ವಂತ ವೆಬ್ ಸೈಟ್ ರೂಪಿಸಿಕೊಳ್ಳಿ

      ಯುವ ಪೀಳಿಗೆಯನ್ನು ಬಹುವಾಗಿ ಆಕರ್ಷಿಸುತ್ತಿರುವ ಇಂಟರ್ನೆಟ್ [^] ಈ-ಯುಗದಲ್ಲಿ ಸಾಕಷ್ಟು  ಬದಲಾವಣೆಗಳನ್ನು ಕಂಡಿದೆ. ಕೆಲ ವರ್ಷಗಳ ಹಿಂದೆ ಕೇವಲ ಸಂಪರ್ಕ ಸಾಧನೆಗಾಗಿ ಬಳಸಲಾಗುತ್ತಿದ್ದ ಇಂಟರ್ನೆಟ್ ಇಂದು ಬ್ಲಾಗ್ ಮತ್ತು ಸೋಷಿಯಲ್ ವೆಬ್ ಸೈಟ್ ಗಳ ಮುಖಾಂತರ ಪ್ರತಿಯೊಬ್ಬರ ವೈಯಕ್ತಿಕ, ಸಾರ್ವಜನಿಕ, ಸಾಮಾಜಿಕ, ಆರ್ಥಿಕ ಜೀವನದ ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದೆ.

      ಬಹುಶಃ ಇಂಟರ್ನೆಟ್ ಮಾಧ್ಯಮವೊಂದೇ ಪ್ರತಿಯೋರ್ವನನ್ನು ಅನೇಕ ಹಂತಗಳಲ್ಲಿ ಬಂಧಿಸಿಟ್ಟಿದೆ. ನಮಗೆ ಸಂಬಂಧಿಸಿದ ಮಾಹಿತಿಯನ್ನು ಅಂತರ್ಜಾಲ [^]ಕ್ಕೆ ಹರಿಯಬಿಡಲು ಇತರ ವೆಬ್ ಸೈಟುಗಳನ್ನು ಅವಲಂಬಿಸುವುದಕ್ಕಿಂತ ನಮ್ಮದೇ ಆದ ವೆಬ್ ಸೈಟ್ ರೂಪಿಸಿಕೊಂಡರೆ ಹೇಗೆ? ವೆಬ್ ಸೈಟನ್ನು ಈ-ಮೇಲ್ ಅಥವಾ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟಲ್ಲಿ ಖಾತೆ ತೆರೆದಷ್ಟೇ ಸುಲಭವಾಗಿ ತಯಾರಿಸಬಹುದು.
      ನಾವೇ ಏಕೆ ವೆಬ್ ಸೈಟ್ ರೂಪಿಸಿಕೊಳ್ಳಬೇಕು ಎಂಬುದಕ್ಕೆ ಇಲ್ಲಿ ಏಳು ಕಾರಣಗಳನ್ನು ನೀಡಲಾಗಿದೆ.
      1) ಭಾವಚಿತ್ರ ಸಂಗ್ರಹ : ನಿಮ್ಮ ಫೋಟೋ ಗ್ಯಾಲರಿ [^]ಯನ್ನು ಜಗತ್ತಿಗೆ ತೋರ್ಪಡಲು ಫೇಸ್ ಬುಕ್ ಅಥವಾ ಟ್ವಿಟ್ಟರ್ [^] ನಂಥ ತಾಣಗಳನ್ನು ಅವಲಂಬಿಸಬೇಕಿಲ್ಲ. ನಿಮ್ಮದೇ ಆದ ವೆಬ್ ಸೈಟ್ ರೂಪಿಸಿ ಆನ್ ಲೈನ್ ಡೈರಿ ಅಥವಾ ಫೋಟೋ ಗ್ಯಾಲರಿ ಮುಖಾಂತರ ನಿಮ್ಮಿಷ್ಟದಂತೆ ಗ್ಯಾಲರಿ ತಯಾರಿಸಬಹುದು.
      2) ನಿಮ್ಮ ದನಿಯನ್ನು ಜಗತ್ತೂ ಕೇಳಲಿ : ನಿಮ್ಮ ಜ್ಞಾನದ, ಅನುಭವಗಳ ಮೂಟೆಯನ್ನು ನಿಮ್ಮಂತೆಯೇ ಯೋಚಿಸುವ ಜಾಗತಿಕ ಸ್ನೇಹಿತರ ಮುಂದೆ ಬಿಚ್ಚಿಡಲು ನಿಮ್ಮ ಅಂತರ್ಜಾಲ ತಾಣಕ್ಕಿಂತ ಪ್ರಶಸ್ತ ಸ್ಥಳ ಸಿಗಲಾರದು. ಚರ್ಚಾ ವೇದಿಕೆ, ಫೋರಂಗಳಲ್ಲಿ ಯಾವುದೇ ವಿಷಯ ಕುರಿತಂತೆ ಮುಕ್ತ ಚರ್ಚೆ ನಡೆಸಬಹುದು. ನಿಮ್ಮ ದನಿಯನ್ನು ಆಲಿಸಿದವರೂ ಗೆಸ್ಟ್ ಬುಕ್ ನಲ್ಲಿ ತಮ್ಮ ಅನಿಸಿಕೆ ಪ್ರಕಟಿಸಬಹುದು.
      3) ಕಡಿಮೆ ಬಂಡವಾಳ ಹೂಡಿಕೆ ಅಧಿಕ ಲಾಭ : ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಣ ಮಾಡಲು ಇಲ್ಲಿ ಸಾಧ್ಯ. ವೆಬ್ ಸೈಟ್ ಸಂದರ್ಶಕರು ಕೆಲ ಉತ್ಪನ್ನಗಳ ಮೇಲೆ ಅಥವಾ ಜಾಹೀರಾತುಗಳ ಮೇಲೆ ಅಥವಾ ಗೂಗಲ್ ಆಡ್ ಸೆನ್ಸ್, ಆಡ್ ವರ್ಡ್ಸ್ ಗಳಂಥ ಕೊಂಡಿಗಳ ಮೇಲೆ ಕ್ಲಿಕ್ಕಿಸುವಂತೆ ಮಾಡಿ ಸುಲಭವಾಗಿ ನಿಮ್ಮ ಜೇಬು ತುಂಬಿಸಿಕೊಳ್ಳಬಹುದು.
      4) ಸಂಪೂರ್ಣ ಸ್ವಾತಂತ್ರ್ಯ ನಿಮ್ಮದು : ಸೋಷಿಯಲ್ ವೆಬ್ ಸೈಟುಗಳು ಇಂಟರ್ನೆಟ್ ಬಳಕೆದಾರರಿಗೆ ವೈಯಕ್ತಿಕ ಮಾಹಿತಿಯನ್ನು ನೀಡುವ ಸಕಲ ಸವಲತ್ತುಗಳನ್ನು ನೀಡಿದ್ದರೂ, ಅಲ್ಲಿ ನಿಮ್ಮಿಷ್ಟದ ಡಿಸೈನಿನಂತೆ ಪ್ರಕಟಿಸುವುದು ಸಾಧ್ಯವಿಲ್ಲ. ಸ್ವಂತ ವೆಬ್ ಸೈಟಿನಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಿಮ್ಮಿಷ್ಟದ ಡಿಸೈನ್ ಬಳಸಿ ಮಾಹಿತಿ ನೀಡುವ ಸಂಪೂರ್ಣ ಸ್ವಾತಂತ್ರ್ಯ ನಿಮ್ಮದು.
      5) ಏಕತೆಯಲ್ಲಿ ಅನೇಕತೆ : ಏಕತೆಯಲ್ಲಿ ಅನೇಕತೆಗಳನ್ನು ಸಾಧಿಸುವುದು ವೆಬ್ ಸೈಟ್ ನಿಮ್ಮದೇ ಒಡೆತನದಲ್ಲಿ ಇದ್ದಾಗ ಮಾತ್ರ. ಒಂದೇ ಡೊಮೇನ್ ಅಡಿಯಲ್ಲಿ ವಿಭಿನ್ನ ಹಂತಗಳಲ್ಲಿ ವೈವಿಧ್ಯಮಯ ಹವ್ಯಾಸ, ಆಸಕ್ತಿ, ರುಚಿಗೆ ತಕ್ಕಂತೆ ವಿಶಿಷ್ಟಬಗೆಯ ಪುಟಗಳನ್ನು ತಯಾರಿಕೆ ಇಲ್ಲಿ ಸಾಧ್ಯವಿದೆ.
      6) ಬ್ಲಾಗ್ ಮಂಡಲ : ಇಂಟರ್ನೆಟ್ ನಲ್ಲಿ ಬ್ಲಾಗುಗಳು ಇನ್ನಿಲ್ಲದಂತೆ ಜನಪ್ರಿಯವಾಗುತ್ತಿವೆ. ಸರ್ಚ್ ಇಂಜಿನ್ ಗಳಿಗೆ ಕೂಡ ಬ್ಲಾಗ್ ಗಳೆಂದರೆ ವಿಶೇಷ ಮಮತೆ. ಓದುಗರ ಸೃಜನಾತ್ಮಕತೆಯನ್ನು ಬಡಿದೆಬ್ಬಿಸಲು ಬ್ಲಾಗುಗಳು ಬಹಳ ಸಹಕಾರಿಯಾಗುತ್ತಿವೆ. ನೆಟ್ಟಿಗರನ್ನು ಹೆಚ್ಚು ಹೆಚ್ಚಾಗಿ ಸೆಳೆಯಲು ಬ್ಲಾಗ್ ಗಳಿಗೆ ಕೂಡ ಇಲ್ಲಿ ಅವಕಾಶ ನೀಡಲು ಸಾಧ್ಯ.
      7) ಜೇಬಿಗೆ ಭಾರವಲ್ಲ : ಹಣ ಹೂಡಿಕೆ ಗಾಬರಿ ಬೀಳುವಂಥ ವಿಷಯವೇ ಅಲ್ಲ. ವೈಯಕ್ತಿಕ ಬಳಕೆಗಾಗಿಯೇ ಇರಲಿ ವ್ಯಾಪರಕ್ಕಾಗಿಯೇ ಇರಲಿ ನಿಮ್ಮ ಕೈಗೆಟಕುವ ದರದಲ್ಲಿ ವೆಬ್ ಸೈಟ್ ರೂಪಿಸುವುದು ಜೇಬಿಗೇನು ಭಾರವಾಗಲಾರದು. ವಾರಕ್ಕೆರಡು ಸಿನೆಮಾ ನೋಡುವವರು ದರ ನೋಡಿ ಬೇಸ್ತು ಬಿದ್ದರೂ ಆಶ್ಚರ್ಯವಿಲ್ಲ. ಡೊಮೇನ್ ಹೆಸರು ಪಡೆಯಲು ವರ್ಷಕ್ಕೆ ಕೇವಲ 185 ರು.!ಹೋಸ್ಟಿಂಗ್ ಪ್ಲಾನ್, ಸಾಕಷ್ಟು ಸ್ಥಳ, ಒಂದು ಉಚಿತ ಈ-ಮೇಲ್ ಖಾತೆ, ಮಾಹಿತಿ ವರ್ಗಾವಣೆ ಮುಂತಾದ ಸೌಲಭ್ಯಗಳು ಈ ದರಕ್ಕೇ ಸಿಗಲಿವೆ.